ಮೊದಲ ಪ್ರೇಮ ಲೇಖನ
ಗೀಚಿ ತಂದಿಹೆ ನಾ........
ಪಿಸು ಮಾತುಗಳ ಮೆಲುಕಿಸಿ
ತುಸು ಕನಸ್ಸುಗಳ ಬೆರಸಿ
ಸವಿ-ಸವಿ ಪದಗಳ ಜೋಡಿಸಿ
ಮನಸ್ಸಂಗಳದ ಚಂದಿರಮನಾಗಲು
ಪತ್ರಾಗಿಲ್ಲ ರಕ್ತ ಸಿಂಚನ
ಪ್ರೀತಿಯ ಮೊದಲ ಮಜುಲು ರೋಮಂಚನ
ಒಲೈಸಿ ಪಸರಿಸುವೆ ಹೃದಯದ ಅನುಸೂಚನ
ಪ್ರೇಯಸಿಯ ಪ್ರೀತಿಗೆ ಪ್ರೇಮಾರ್ಚನಾ
ಮುಸು-ಮುಸುಕಿನ ಈ ಒಲೆ
ನನ್ನ ಭಾವನೆಗಳ ಸರಮಾಲೆ
ಪೊಣಿಸಿ-ಪೊಣಿಸಿ ಪೊಣರ್ತಹಿಸಿರುವೆ
ತೋರಲು ನಿನ್ನ ಮುಂದೆ ನನ್ನ ಪರಿಪೊರ್ಣ ಕಲೆ
ಪದೆ-ಪದೆ ಯೊಚಿಸಿ
ಪ್ರೀತಿಯ ಸೂಚನೆಯ ಪಾಲಿಸಿ
ಮುಗ್ದ ಮನಸ್ಸಿನ ಕೋಟೆಗೆ ಲಗ್ಗೆಯಾಕಲು
ಸದ್ದಿಲದೆ ಹೆಜ್ಜೆ-ಸವಿಗೆಜ್ಜೆಯ ಬುಗ್ಗೆಯಕಿರುವೆ
ಹೃದಯವೆಂಬ ಪುಸ್ತಕವ ತೆರದು
ಮಧುರ ಪ್ರೀತಿಯ ಪುಟಗಳ
ಓದುಲು ಮತ್ತೆ-ಮತ್ತೆ ತಿರಗಿಸಿ
ಅತ್ತ-ಇತ್ತ ನೆನಪಿಸಿ ನಾ ಯಾಚಿಸಿರುವೆ
ಈ ನುಡಿಗಳ ನುಡಿಯಲಾಗದೆ
ನಾ ನಡು-ನಡುಗಿ
ಗೀಚಿ ತಂದಿಹೆ ನಾ
ಮೊದಲ ಪ್ರೇಮ ಲೇಖನ..........
........... ಬರಹ ಭಾವನೆಗಳ ಪ್ರತಿಬಿಂಬ
No comments:
Post a Comment