Thursday, February 9, 2012

ನ್ಶಿಪ್ರಯೋಜಕ



ಹಸಿದ ಹೊಟ್ಟೆಯ
ಬಸಿದ ಮಾತನು
ಕಸದಲಿ ತಳ್ಳುವ
ಹೆಸಿಗೆಯ ಕಾರಣಿಗಳೇ
ನಿಮ್ಮಗೊಂದು ಸಲಾಮ್
ಛೀ......ತ್ತು....ತ್ತು....

ನಾಚಿಕೆಯ ಬದಿಗಿಟ್ಟೂ
ಎಲ್ಲಾ ದೊಚಿಕೊಳ್ಳುವ
ನೀಚ ಬುದ್ದಿವುಳ್ಳ
ನಾಡ ಕೀಚಕರೇ
ನಿಮ್ಮಗೊಂದು ಸಲಾಮ್
ಛೀ......ತ್ತು....ತ್ತು....

ಊರ ಉದ್ದಾರ ಬಿಟ್ಟು
ತಮ್ಮವರ ಉದ್ದಾರದ
ದೂರುದ್ದೆಷದಲಿ ದುಡಿಯುವ
ನಿಸ್ವಾರ್ತ ದೇಶೊದರಕರೇ

ನಿಮ್ಮಗೊಂದು ಸಲಾಮ್.........

                                               ಇಂತಿ ನಿಮ್ಮ ನ್ಶಿಪ್ರಯೋಜಕ
                                                    ಮಾತದಾರ

ಆಸರೆ

ನಮ್ಮದು ಒಂದೇ ಅಸೆ
ಕೊಡುವಿರಾ ಬರವಸೆ
ಮುರಿಯದಿರಿ
ನಮಗಿಲ್ಲ ದಿಕ್ಕು ದೆಸೆ

ಹೆಕ್ಕಿ ತಂದ ಗೂಡು
ಕಿತ್ತುಕೊಂಡಿರೀ ನೀವು
ಕಟ್ಟಲಾಗದು ಮತ್ತೆ
ಈಗ ಅದರದೇ ಚಿಂತೆ

ನಿಮ್ಮಿಂದ ಪಾರಗೋದೆ
ನಮಗಿರುವ ಪರೀಕ್ಷೆ
ನಮ್ಮ ಕರ್ಪನ್ಯವ
ಕೇಳುವರದೇ ನಿರೀಕ್ಷೆ

ನಿಮಗಿಲ್ಲ ಯಾವುದೇ
ಬಾವದ ಅನುಕಂಪತೆ
ಎಷ್ಟಿದರು ನಮಗೆ
ದುಡುವಿರಿ ಕಂಡಿತ ಚಿತೆ

ನಾನು ಯಾರು...???




ಒಲವೆಂಬ ಹೂವಾಗಿ
ಚಲುವೆಂಬ ಗಿಡದಲಿ
ಉದಯಿಸುವೇ....
ನಾನು ಯಾರು...???


ನಾ ಮನೆ ಮಾಡೀರುವೆ
ಎಲ್ಲರ ಜನ-ಮನದಲಿ
ನೀ ನನ್ನ ಕಾಣುವಿರಿ ಸಾದ
ತಾಯಿಯ ಮಡಿಲಿನಲಿ

ತೋರುವರು ಕೇಲವರು
ತೋರದವರು ಹಲವರು
ನನ್ನಿಂದ ಸಾಗಿದೆ ಕಾಯಕ
ಅದರಿಂದ ಆಗುವೆನು ರಕ್ಷಕ


ನನ್ನ ಪಾಲಿಸುವನಿಗೆ
ನಾ ಬಲು ಇಷ್ಟ
ನನ್ನ ವಿರೋದಿಸುವನಿಗೆ
ನಾನೆಂದರೆ ಕಷ್ಟ


ನಾನಿಲ್ಲದ ಮನ
ಛಲವಿಲ್ಲದ ಕದನ
ನನ್ನ ಕಾಣುವ ಮನ
ತೋರದು ನರಕವ


ನೀವು ಕಾಣುವಿರಿ ಮುಗ್ದ
ಮನದ ಹೃದಯಗಳ
ಚಲುವು -ಓಲವಿನ
ಸುಂದರ ಮಿಲನದಲಿ

ಹೃದಯ ಕದ್ದ ಚಲುವೆ ....

ಯಾರಿವಳು ಯಾರಿವಳು...
ಹೃದಯ ಕದ್ದ ಚಲುವೆ ....

ಮಂದಾಹಸದ....
ಮಂಕು ಹೆರಚಿ
ಮೌನದಿಂದಲೇ....
ಮನಸ್ಸ ಕೇಡಿಸಿಹಳು

ಮಿಂಚಿನಂತ ಕಣ್ಣ ಬೆಳಕ ಹರಿಸಿ
ಅಂಧನ ದಾರಿ ದೀಪವಾಗಿಹಳು

ಕಾರಣವಿಲ್ಲದೆ ಸಂಕೊಲೆಯ ತೋಡಿಸಿ
ಪ್ರೀತಿಯ ಖೈದಿಯಾಗಿಸಿಹಳು

ಕೊಂಚ ದುಗುಡವಿರಿಸಿ.....
ಹೃದಯ ಅಪಹರಿಸಿಹಳು

ಯಾರಿವಳು ಯಾರಿವಳು...
ಹೃದಯ ಕದ್ದ ಚಲುವೆ ....
ನಮ್ಮದು ಒಂದೇ ಅಸೆ
ಕೊಡುವಿರಾ ಬರವಸೆ
ಮುರಿಯದಿರಿ ಆಸರೆ
ನಮಗಿಲ್ಲ ದಿಕ್ಕು ದೆಸೆ

ಹೆಕ್ಕಿ ತಂದ ಗೂಡು
ಕಿತ್ತುಕೊಂಡಿರೀ ನೀವು
ಕಟ್ಟಲಾಗದು ಮತ್ತೆ
ಈಗ ಅದರದೇ ಚಿಂತೆ

ನಿಮ್ಮಿಂದ ಪಾರಗೋದೆ   
 ನಮಗಿರುವ  ಪರೀಕ್ಷೆ 
ನಮ್ಮ ಕರ್ಪನ್ಯವ
ಕೇಳುವರದೇ ನಿರೀಕ್ಷೆ

ನಿಮಗಿಲ್ಲ  ಯಾವುದೇ
ಬಾವದ  ಅನುಕಂಪತೆ
ಎಷ್ಟಿದರು ನಮಗೆ 
ದುಡುವಿರಿ ಕಂಡಿತ ಚಿತೆ